top of page

An Appeal to the Devotees

Read this appeal in other languages: Englishதமிழ், తెలుగు and हिन्दी

ಸಮಸ್ತ ಭಕ್ತಾದಿಗಳಲ್ಲಿ ವಿನಂತಿ,

 

ಕೆನಡಾ ದೇಶದ ಒಂಟಾರಿಯೊ ಪ್ರಾಂತ್ಯದಲ್ಲಿರುವ ಸುಂದರ "ಮುಸ್ಕೋಕಾ"ದಲ್ಲಿ 14 ಎಕರೆ ಭೂಮಿಯಲ್ಲಿ ಬೃಹತ್-ದೇವಾಲಯವನ್ನು ನಿರ್ಮಿಸುವ ನಮ್ಮ ಯೋಜನೆಯನ್ನು ಘೋಷಿಸಲು ನಾವು ಉತ್ಸುಕರಾಗಿದ್ದೇವೆ. ಈ ಪವಿತ್ರ-ಕ್ಷೇತ್ರವು ಭಾರತ ದೇಶದ ರಾಮೇಶ್ವರ, ಪ್ರಯಾಗ, ಕಾಶಿ, ಗಯಾ ಮತ್ತು ಬದರಿನಾಥ ಮುಂತಾದ  ಪ್ರಮುಖ-ಪುಣ್ಯ ಕ್ಷೇತ್ರಗಳ ಸಮ್ಮಿಲನವಾಗಿ ಪ್ರತಿಬಿಂಬಿಸಲಿದೆ. ಈ ಕ್ಷೇತ್ರದಲ್ಲಿ ತಿಲ ಹೋಮ, ಕ್ಷೇತ್ರ ಪಿಂಡ ಸೇರಿದಂತೆ ವಿವಿಧ-ರೀತಿಯ ಪರಿಹಾರ ಮಾಡುವ ಸೌಲಭ್ಯವಿರುತ್ತದೆ, ಹಾಗೂ ಅಕಾಲಿಕ ಮರಣ, ವಿವಿಧ ಕಾರಣದಿಂದ ಉಂಟಾಗುವ ಪಿತೃ ದೋಷಗಳು, ಸ್ತ್ರೀ ದೋಷಗಳು ಮತ್ತು ಇತರ ಕರ್ಮ-ಕ್ರಯಗಳಿಂದ  ಹೊರಬರಲು ಸಮಸ್ತ-ಭಕ್ತರಿಗೆ ಶಾಸ್ತ್ರ-ಪ್ರಕಾರ ಕರ್ಮ-ಸಿದ್ದಿ ಪ್ರಾಪ್ತಿಸುವ  ಗುರಿಯನ್ನು ಹೊಂದಿದ್ದೇವೆ. 

 

ಈ ಪವಿತ್ರ ಕ್ಷೇತ್ರದಲ್ಲಿ ನಾವು ಮಹಾವಿಷ್ಣು, ಕಾಶಿ ವಿಶ್ವನಾಥರು, ಕಾಲ ಭೈರವ, ನವಗ್ರಹಗಳು, ಸಪ್ತಋಷಿಗಳು ಸೇರಿದಂತೆ ವಿವಿಧ ದೇವ/ದೇವತೆಗಳ ಪೂಜೆಗಳು ಹಾಗೂ ಅನೇಕ ವೈಭವದ  ಆಚರಣೆಗಳನ್ನು ನಡೆಸುತ್ತೇವೆ. ಇದರಿಂದ ಒದಗಿಬರುವ ತಪಶ್ಶಕ್ತಿಯಿಂದ ಸಮಸ್ತ-ಭಕ್ತರಿಗೂ ಮಂಗಳವಾಗಲೆಂದು ಆಶಿಸುತ್ತೇವೆ.

 

ಈ ಬೃಹತ್-ದೇವಾಲಯವನ್ನು ಪೂರ್ಣಗೊಳಿಸಲು ಆಗುವ ಅಂದಾಜು ವೆಚ್ಚ 6 ಮಿಲಿಯನ್ ಕೆನಡಿಯನ್ ಡಾಲರ್ ಆಗಲಿದೆ. ಈ ದೈವಿಕ ದೃಷ್ಟಿಯನ್ನು ಸಾಕಾರಗೊಳಿಸಲು, ಹಾಗೂ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಲು ನಮಗೆ ನಿಮ್ಮೆಲ್ಲರ "ಕಾಯಾ-ವಾಚಾ-ಮನಸಾ" ಉದಾರ ಆರ್ಥಿಕ ಸಹಾಯದ ಅತ್ಯವಶ್ಯಕತೆವಿರುತ್ತದೆ.

 

ಸರ್ವರಿಗೂ  ಆಧ್ಯಾತ್ಮಿಕ ಧಾಮವನ್ನು ನಿರ್ಮಿಸುವ ಈ ಮಂಗಳಕರ ಪ್ರಯತ್ನದಲ್ಲಿ ನೀವೆಲ್ಲರೂ ನಮ್ಮೊಂದಿಗಿರುವ ಭರವಸೆ ನಮ್ಮಲ್ಲಿದೆ. ಈ ಸದುದ್ದೇಶಕ್ಕೆ ಆರ್ಥಿಕ ಕೊಡುಗೆ/ಸಹಾಯ ಮಾಡಲು ಆಶಿಸುವ ಭಕ್ತಾದಿಗಳು, ನಿಮ್ಮ ಕೊಡುಗೆಗಳನ್ನು ಇಂಟರಾಕ್(Interac) ಮೂಲಕ brampton.veda@gmail.com ಗೆ ಕಳುಹಿಸಲು ನಾವು ವಿನಂತಿಸುತ್ತೇವೆ. ನಿಮ್ಮ ಕೊಡುಗೆಗಳು ಮುಂದಿನ ಪೀಳಿಗೆಗೆ ನಂಬಿಕೆ ಮತ್ತು ಭಕ್ತಿಯ ಪರಂಪರೆಯನ್ನು ಪಸರಿಸಲು ಸಹಾಯ ಮಾಡುತ್ತದೆ.

 

ಹೃತ್ಪೂರ್ವಕ ಕೃತಜ್ಞತೆಯೊಂದಿಗೆ,

 

ಪಿ. ಬಾಲಕೃಷ್ಣ ಶಾಸ್ತ್ರಿಗಳು

  • Instagram
  • Facebook
  • Youtube

©2035 by Hindu Temple. Powered and secured by Wix

bottom of page